Skip to content

ಹೊಸ ದಿಗಂತದಲ್ಲಿ ಪರದೇಶಿ ಪರಪಂಚ….!

October 15, 2011

                 “ಪರದೇಶಿ ಪರಪಂಚ” ಇದು ಹೊಸದಿಗಂತದಲ್ಲಿ ಇಂದಿನಿಂದ (ಅಕ್ಟೋಬರ್ ೧೫ ೨೦೧೧) ಪ್ರಾರಂಭವಾಗಿರುವ ಅಂಕಣ. ಪ್ರಸ್ತುತ ನಾನು ಅಮೇರಿಕೆಯಲ್ಲಿ ಉದ್ಯೋಗ ನಿಮಿತ್ತ ಇದ್ದೇನೆ. “ಪರಸ್ಥಳ ಪ್ರಾಣಸಂಕಟ” ಎಂಬ ಮಾತು ಇದೆ. ಪರಸ್ಥಳದಲ್ಲಿ ಗೊತ್ತಿರುವವರು ಯಾರೂ ಇರುವುದಿಲ್ಲ, ಜನ, ಭಾಷೆ, ನಡವಳಿಕೆ, ಆಹಾರ, ವಾತಾವರಣ ಎಲ್ಲವೂ ಭಿನ್ನವಾಗಿರುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಲ್ಲಿಗೆ ಹೊಂದಿಕೊಳ್ಳುವುದಕ್ಕೆ ಕಷ್ಠ ಎಂಬ ಅರ್ಥದಲ್ಲಿ ಹುಟ್ಟಿಕೊಂಡ ಮಾತು ಅದು. ಆದರೆ ಈಗ “ಗ್ಲೋಬಲ್ ವಿಲೇಜ್” ಎಂದು ಕರೆಯುವ ಮಟ್ಟಿಗೆ ಜಗತ್ತು ಚಿಕ್ಕದಾಗಿದೆ. ಸಂಪರ್ಕ ಬೆಳೆದಿದೆ. ಪ್ರಪಂಚದ ಮೂಲೆ ಮೂಲೆಗೂ ನಿಮಿಷದಲ್ಲೇ ಸಂಪರ್ಕ ಸಾಧಿಸಬಹುದಾದಷ್ಟು ತಂತ್ರಜ್ನಾನ ಮುಂದುವರೆದಿದೆ. ಜಗತ್ತಿನ ಮೂಲೆ ಮೂಲೆಗೆ  ಭಾರತೀಯರು ಉದ್ಯೋಗಕ್ಕಾಗಿ ಒಲಸೆ ಹೋಗಿದ್ದಾರೆ. ಆದ್ದರಿಂದ ಯಾವುದೇ ಪರಸ್ಥಳದಲ್ಲಿ ಕೂಡ ಹುಡುಕಿದರೆ ನಮ್ಮವರು ಕಾಣಸಿಗುತ್ತಾರೆ. ಇಂಟರ್ ನೆಟ್, ಗೂಗಲ್ ಮ್ಯಾಪ್ ಗಳು ಪ್ರತಿ ತಿರುವನ್ನೂ ಗೊತ್ತು ಮಾಡಿಸುವಷ್ಟು ಮಾಹಿತಿ ನೀಡುತ್ತವೆ. ಆದ್ದರಿಂದ ಪರಸ್ಥಳ, ಪರದೇಶ ಪ್ರಾಣಸಂಕಟವೆನ್ನುವ ಹಾಗಿಲ್ಲ ಬದಲಿಗೆ ಇದು ವಿಸ್ಮಯ. ಆಹಾರ, ವಿಹಾರ, ಮಾತು, ಉಡುಗೆ, ಆಚರಣೆ ಎಲ್ಲವೂ ಭಿನ್ನವಿರುವ ಜನಗಳೊಂದಿಗೆ ಬದುಕುವುದು, ಇಲ್ಲಿನ  ನವೀನತೆಗೆ ತೆರೆದುಕೊಳ್ಳುವುದು ಒಂದು ರೀತಿ ಸಿಹಿ ಸಂಕಟ. ಎಷ್ಠೇ ಆದರೂ ಹುಟ್ಟಿ ಬೆಳೆದ ಊರು, ಬದುಕು ಕಟ್ಟಿಕೊಂಡ ನಾಡು, ಬದುಕು ರೂಪಿಸಿದ ಪೋಷಕರು, ಭುಜತಟ್ಟಿದ ಬಂಧುಗಳು, ಆಸರೆಗೆ ನಿಂತ ಸ್ನೇಹಿತರು ಎಲ್ಲರನ್ನೂ ಬಿಟ್ಟು ದೂರತೀರಕ್ಕೆ ಬಂದು ಬದುಕುವುದು ಸುಲಭವೇನೂ ಅಲ್ಲ. ದೈನಂದಿನ ಬದುಕು, ವ್ಯವಹಾರ ಇಲ್ಲಿಯಾದರೂ, ಮನಸ್ಸು ಮಾತ್ರ ಭಾರತದಲ್ಲೇ. ಭಾರತದಲ್ಲಿ ಏನಾಗುತ್ತಿದೆ, ಕರ್ನಾಟಕದಲ್ಲಿ ನಡೆದ ಬೆಳವಣಿಗೆಗಳೇನು, ಊರಿನ ಸುದ್ಧಿ, ಸಿನಿಮಾ, ಕ್ರೀಡೆ, ರಾಜಕೀಯ ಇತ್ಯಾದಿಗಳಲ್ಲಿ ಹೊಸತೇನು ಎನ್ನುವ ಕುತೂಹಲ ಇದ್ದೇ ಇರುತ್ತದೆ. ವಿದೇಶದಲ್ಲಿನ ವಿಸ್ಮಯ ಮತ್ತು ಸ್ವದೇಶದಲ್ಲಿನ ವಿದ್ಯಾಮಾನವನ್ನು ಗಮನಿಸುತ್ತ, ಜೊತೆಗೆ ಓದಿದ್ದು, ನೋಡಿದ್ದು, ಅನುಭವಕ್ಕೆ ಬಂದದ್ದನ್ನು ಒಂದಷ್ಟು ಜನರೊಂದಿಗೆ ಹಂಚಿಕೊಳ್ಳುವುದೇ “ಪರದೇಶಿ ಪರಪಂಚ”ದ ಉದ್ದೇಶ. ಈ ಬ್ಲಾಗ್ ನ ಬರಹಗಳು ಇಷ್ಠವಾಗಿದ್ದರೆ ಹೊಸದಿಂಗತದ ಅಂಕಣವೂ ಇಷ್ಠವಾಗಬಹುದು. ಇನ್ನು ಮುಂದೆ ಈ ಬ್ಲಾಗ್ ನೊಂದಿಗೆ ಪ್ರತಿಶನಿವಾರ ಹೊಸದಿಂಗತದಲ್ಲೂ ಪರದೇಶಿ ಪರಪಂಚದ ಮೂಲಕ ಸಿಗುತ್ತೇನೆ. ನೀವು ಆಗಾಗ ಅರಳೀಕಟ್ಟೆ ಸುತ್ತು ಹಾಕುತ್ತಲೇ, ಪ್ರತಿ ಶನಿವಾರ ಹೊಸದಿಗಂತದ ಪುಟಗಳನ್ನೂ ತಿರುವಿ ಹಾಕುತ್ತೀರೆನ್ನುವ ನಂಬಿಕೆ ಇದೆ.

One Comment leave one →
  1. vikas permalink
    October 18, 2011 7:38 am

    All the best…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.